ದಲಿತ ಮಹಿಳೆಯ ಶೋಷಣೆಯ ಕಥೆ ಪರೀಕ್ಷೆ
Posted date: 18/February/2010

ಅಸ್ಪ್ರಶ್ಯರ ಶೋಷಣೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ದೇವರಕೆರೆ ಎಂಬ ಹಳ್ಳಿಯ ಕೆಳವರ್ಗದ ಸುಂದರ ಹೆಣ್ಣು ಬಂಗಾರಿಯ ಮೇಲೆ ಮೇಲ್ಜಾತಿಯವರು ನಡೆಸುವ ದೌರ್ಜನ್ಯ, ದಬ್ಬಾಳಿಕೆಯ ಕಥೆ ಹೊಂದಿರುವ ಚಿತ್ರ ಪರೀಕ್ಷೆ. ಆ ಊರಿನ ವೈದ್ಯ ಬಸವರಾಜನ ಆಸೆಯನ್ನು ತಿರಸ್ಕರಿಸಿದ ಬಂಗಾರಿಗೆ ಏಡ್ಸ್ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಾನೆ. ಒಮ್ಮೆ ಮೇಲ್ಜಾತಿಯ ವೀರಭದ್ರಪ್ಪನಿಗೆ ಅಪಘಾತವಾದಾಗ ಬಂಗಾರಿಯ ರಕ್ತವೇ ಆತನ ಜೀವ ರಕ್ಷಿಸುತ್ತದೆ. ಆಗ ಆ ಊರಿನ ಜನಕ್ಕೆ ತಮ್ಮ ತಪ್ಪಿನ ಅರಿವಾಗುತ್ತದೆ. ಸುಂದರಿ ಬಂಗಾರಿಯ ಪಾತ್ರದಲ್ಲಿ ಅನುಪ್ರಭಾಕರ್ ಅಭಿನಯಿಸಿದ್ದಾರೆ. ಬೆಳಗಾವಿಯ ಸುತ್ತ ಮುತ್ತ ಬೆಂಡಿಗೇರಿ, ಅಣ್ಣಿಗೇರಿ ಹಾಗೂ ಗಜಪತಿಯಲ್ಲಿ ೧೪ ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಈಗಾಗಲೆ ಡಬ್ಬಿಂಗ್ ಕಾರ್ಯಮುಗಿದಿದ್ದು ಇದೀಗ ವಿಜಯನಗರದ ಹೇಮಂತ್ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ.
ಗೋಮಟೇಶ್ ಫಿಲಂ ಮೇಕರ‍್ಸ್ ಲಾಂಛನದಲ್ಲಿ ಸಂಜಯ.ಬಿ.ಪಾಟೀಲ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶ ಮಾಡುತ್ತಿರುವವರು ಎ.ಆರ್.ರವೀಂದ್ರ, ಸೀತಾರಾಂ ಕಾರಂತ ಚಿತ್ರಕಥೆ, ಶಶಿಧರ್‌ಭಟ್ಟರ್ ಸಂಭಾಷಣೆ, ಹೇಮಂತಕುಮಾರ್ ಸಂಗೀತ, ಗೀತಪ್ರಿಯ ಸಾಹಿತ್ಯ, ಆರ್.ಮಂಜುನಾಥ ಛಾಯಾಗ್ರಹಣ, ಟಿ.ಗೋವರ್ಧನ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಅನುಪ್ರಭಾಕರ್, ವಿನಯ್‌ಕುಮಾರ್, ಮುನಿ, ಸಿದ್ದರಾಜ್ ಕಲ್ಯಾಣ್‌ಕರ್, ಶಾಂತಮ್ಮ, ಮಾ: ಕಿರಣ್ ವಿಶೇಷ ಪಾತ್ರದಲ್ಲಿ ಏಣಗಿ ಬಾಳಪ್ಪ ಅಭಿನಯಿಸಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed